Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ಬೆಳಗಾವಿಯಲ್ಲಿ ಸಿನಿಮೀಯ ಮಹಾ ರಾಬರಿ! ₹400 ಕೋಟಿ ಕಂಟೇನರ್ ಹೈಜಾಕ್ – ₹1000 ಕೋಟಿ ಹಗರಣದ ಶಂಕೆ, SIT ತನಿಖೆ

ಮೂರು ರಾಜ್ಯಗಳ ಗಡಿಭಾಗದಲ್ಲಿ ನಡೆದ ಭಯಾನಕ ಹಾಗೂ ಸಿನಿಮೀಯ ಮಾದರಿಯ ಮಹಾ ದರೋಡೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯ ಛೋರ್ಲಾ ಘಾಟ್ ಪ್ರದೇಶದಲ್ಲಿ ನಡೆದ ಈ ಪ್ರಕರಣ ಈಗ ರಾಷ್ಟ್ರ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ.

2025ರ ಅಕ್ಟೋಬರ್ 16ರಂದು ಗೋವಾದಿಂದ ಮಹಾರಾಷ್ಟ್ರದತ್ತ ಸಾಗಿಸಲಾಗುತ್ತಿದ್ದ ಬರೋಬ್ಬರಿ ₹400 ಕೋಟಿ ಮೌಲ್ಯದ (ಹಳೆಯ ₹2000 ಮುಖಬೆಲೆಯ ನೋಟುಗಳು) ಹಣವಿದ್ದ ಕಂಟೇನರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಈ ಪ್ರಕರಣದ ಹಿಂದೆ ಭಾರಿ ಸಂಚು, ರಾಜಕೀಯ ನಂಟು, ಪೊಲೀಸ್ ಪಾತ್ರ ಮತ್ತು ಅಪಹರಣದ ಆರೋಪಗಳು ಒಂದೊಂದಾಗಿ ಹೊರಬರುತ್ತಿವೆ.

ಹೇಗೆ ನಾಪತ್ತೆಯಾಯಿತು ₹400 ಕೋಟಿ ಹಣದ ಕಂಟೇನರ್?

ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಈ ಹಣವನ್ನು ರಹಸ್ಯವಾಗಿ ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್ ಪ್ರದೇಶ ತಲುಪಿದ ಬಳಿಕ ಕಂಟೇನರ್ ಚಾಲಕನೊಂದಿಗೆ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ. ಕೆಲವೇ ಗಂಟೆಗಳಲ್ಲಿ ಕಂಟೇನರ್ ಸಂಪೂರ್ಣವಾಗಿ ನಾಪತ್ತೆಯಾಗಿದ್ದು, ಇದೊಂದು ಸಾಮಾನ್ಯ ಕಳ್ಳತನವಲ್ಲ, ಪೂರ್ವಯೋಜಿತ ಮಹಾ ದರೋಡೆ ಎಂಬ ಅನುಮಾನಗಳು ಬಲಪಡುತ್ತಿವೆ.

ಪೊಲೀಸ್ ಮೂಲಗಳ ಪ್ರಕಾರ, ಈ ಕಂಟೇನರ್‌ನಲ್ಲಿ ಸಾಗುತ್ತಿದ್ದ ಹಣ ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್‌ಗೆ ಸೇರಿದೆ ಎನ್ನಲಾಗುತ್ತಿದೆ. ಈ ಹಣವನ್ನು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸಲು ಸಾಗಿಸಲಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

₹1000 ಕೋಟಿ ಹಗರಣದ ಶಂಕೆ – ಸ್ಫೋಟಕ ವಿಡಿಯೋ ಹೇಳಿಕೆ

ಈ ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿರುವುದು ದೂರುದಾರ ಹಾಗೂ ಸಂತ್ರಸ್ತ ಸಂದೀಪ್ ಪಾಟೀಲ್ ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆ. ವಿಡಿಯೋದಲ್ಲಿ ಅವರು ಕಣ್ಣೀರಿಟ್ಟು ಮಾತನಾಡುತ್ತಾ, “ಇದು ಕೇವಲ ₹400 ಕೋಟಿ ದರೋಡೆ ಅಲ್ಲ. ಒಟ್ಟು ₹1000 ಕೋಟಿಗೂ ಅಧಿಕ ಹಣದ ಹಗರಣ ಇದಾಗಿದೆ” ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಸಂದೀಪ್ ಪಾಟೀಲ್ ಅವರ ಹೇಳಿಕೆಯ ಪ್ರಕಾರ, ಹಿಂಪಡೆಯಲಾದ ₹2000 ನೋಟುಗಳನ್ನು ಹೊತ್ತೊಯ್ಯುತ್ತಿದ್ದ ಕಂಟೇನರ್ ನಾಪತ್ತೆಯಾದ ಬೆನ್ನಲ್ಲೇ, ಕಿಶೋರ್ ಶೇಟ್ ಸಹಚರರು ನನ್ನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ನಾನು ಈ ದರೋಡೆಗೆ ಕಾರಣ ಎನ್ನುವ ಆರೋಪ ಮಾಡಿ, ನನ್ನನ್ನು ಅಪಹರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಈ ಹಣವನ್ನು ರಹಸ್ಯವಾಗಿ ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್ ಪ್ರದೇಶ ತಲುಪಿದ ಬಳಿಕ ಕಂಟೇನರ್ ಚಾಲಕನೊಂದಿಗೆ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ. ಕೆಲವೇ ಗಂಟೆಗಳಲ್ಲಿ ಕಂಟೇನರ್ ಸಂಪೂರ್ಣವಾಗಿ ನಾಪತ್ತೆಯಾಗಿದ್ದು, ಇದೊಂದು ಸಾಮಾನ್ಯ ಕಳ್ಳತನವಲ್ಲ, ಪೂರ್ವಯೋಜಿತ ಮಹಾ ದರೋಡೆ ಎಂಬ ಅನುಮಾನಗಳು ಬಲಪಡುತ್ತಿವೆ.

ಪೊಲೀಸ್ ಮೂಲಗಳ ಪ್ರಕಾರ, ಈ ಕಂಟೇನರ್‌ನಲ್ಲಿ ಸಾಗುತ್ತಿದ್ದ ಹಣ ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್‌ಗೆ ಸೇರಿದೆ ಎನ್ನಲಾಗುತ್ತಿದೆ. ಈ ಹಣವನ್ನು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸಲು ಸಾಗಿಸಲಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಕಿಡ್ನಾಪ್, ಚಿತ್ರಹಿಂಸೆ ಮತ್ತು ₹100 ಕೋಟಿ ಡಿಮ್ಯಾಂಡ್

ಸಂದೀಪ್ ಪಾಟೀಲ್ ನೀಡಿರುವ ಮಾಹಿತಿಯಂತೆ, ಅವರನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿ ಸುಮಾರು ಒಂದೂವರೆ ತಿಂಗಳ ಕಾಲ ಗುಪ್ತ ಸ್ಥಳದಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. “ನಾಪತ್ತೆಯಾದ ₹400 ಕೋಟಿ ಹಣದ ಕಂಟೇನರ್ ಎಲ್ಲಿದೆ ಹೇಳು. ಇಲ್ಲವಾದರೆ ಈಗ ಚಾಲ್ತಿಯಲ್ಲಿರುವ ₹100 ಕೋಟಿ ಹಣವನ್ನು ಕೊಡಬೇಕು” ಎಂದು ಒತ್ತಡ ಹೇರಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅವಧಿಯಲ್ಲಿ ಅವರಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಲಾಗಿದೆ. ಜೀವ ಬೆದರಿಕೆ ಹಾಕಿ, ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಲಾಗಿದೆ ಎಂದು ವಿಡಿಯೋದಲ್ಲಿ ಅವರು ಕಣ್ಣೀರಿಟ್ಟು ವಿವರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸ್ ಅಧಿಕಾರಿಗಳ ಪಾತ್ರವಿದೆಯೇ?

ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರುಗಳು ಕೇಳಿಬಂದಿರುವುದು ಮತ್ತಷ್ಟು ಸಂಚಲನ ಮೂಡಿಸಿದೆ. “ಪೊಲೀಸ್ ಅಧಿಕಾರಿಗಳೇ ನನಗೆ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಪ್ರಕರಣವನ್ನು ಬಹಿರಂಗಪಡಿಸಬೇಡ ಎಂದು ಒತ್ತಡ ಹೇರಿದ್ದರು” ಎಂದು ಸಂದೀಪ್ ಪಾಟೀಲ್ ಆರೋಪಿಸಿದ್ದಾರೆ.ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರುಗಳು ಕೇಳಿಬಂದಿರುವುದು ಮತ್ತಷ್ಟು ಸಂಚಲನ ಮೂಡಿಸಿದೆ. “ಪೊಲೀಸ್ ಅಧಿಕಾರಿಗಳೇ ನನಗೆ ವಾಟ್ಸಾಪ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಪ್ರಕರಣವನ್ನು ಬಹಿರಂಗಪಡಿಸಬೇಡ ಎಂದು ಒತ್ತಡ ಹೇರಿದ್ದರು” ಎಂದು ಸಂದೀಪ್ ಪಾಟೀಲ್ ಆರೋಪಿಸಿದ್ದಾರೆ.

ಜೀವ ಭಯದಿಂದ ನಾನು ಈವರೆಗೂ ಮೌನವಾಗಿದ್ದೆ. ಆದರೆ ತನಿಖೆ ನಡೆಸಿದಾಗ, ಹಣದ ಕಂಟೇನರ್ ನಾಪತ್ತೆಗೆ ಕಿಶೋರ್ ಶೇಟ್ ಸಹಚರರೇ ಕಾರಣ ಎನ್ನುವುದು ತಿಳಿಯಿತು. ಪೊಲೀಸರ ಮೂಲಕ ನನ್ನ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನ ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ನಾಲ್ವರು ಬಂಧನ, ಇನ್ನಿಬ್ಬರಿಗಾಗಿ ಶೋಧ

ಈ ಪ್ರಕರಣ ಸಂಬಂಧ ನಾಸಿಕ್ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂಧಿತರ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಹಣದ ಚಲಾವಣೆ, ರಾಜಕೀಯ ಸಂಪರ್ಕ ಮತ್ತು ಪೊಲೀಸ್ ನಂಟಿನ ಬಗ್ಗೆ ತನಿಖೆ ನಡೆಯುತ್ತಿದೆ.

SIT ತನಿಖೆಗೆ ಆದೇಶ

ಪ್ರಕರಣದ ಗಂಭೀರತೆ ಅರಿತ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ತಕ್ಷಣವೇ ವಿಶೇಷ ತನಿಖಾ ತಂಡ (SIT) ರಚನೆಗೆ ಆದೇಶಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಗೋವಾ ಪೊಲೀಸರಿಗೆ ಪತ್ರ ಬರೆದು ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಲಾಗಿದೆ.ಪ್ರಕರಣದ ಗಂಭೀರತೆ ಅರಿತ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ತಕ್ಷಣವೇ ವಿಶೇಷ ತನಿಖಾ ತಂಡ (SIT) ರಚನೆಗೆ ಆದೇಶಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಗೋವಾ ಪೊಲೀಸರಿಗೆ ಪತ್ರ ಬರೆದು ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಯಾವುದೇ ಪ್ರಭಾವಿಗಳಿಗೆ ರಕ್ಷಣೆ ನೀಡದಂತೆ ಕಟ್ಟುನಿಟ್ಟಿನ ತನಿಖೆ ನಡೆಸಲು ಸೂಚನೆ ನೀಡಿದೆ.

ಜೀವ ಭಯ ಹೇಳಿಕೊಂಡ ದೂರುದಾರ

ಸಂದೀಪ್ ಪಾಟೀಲ್ ತಮ್ಮ ಜೀವಕ್ಕೆ ಅಪಾಯವಿದೆ ಎಂದು ದೇವೇಂದ್ರ ಫಡ್ನವಿಸ್ ಅವರ ಬಳಿ ರಕ್ಷಣೆ ಕೋರಿ ಮನವಿ ಮಾಡಿದ್ದಾರೆ. “ನನ್ನ ಕುಟುಂಬಕ್ಕೂ ಅಪಾಯವಿದೆ. ನನಗೆ ಭದ್ರತೆ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಈಗ ಮೂರು ರಾಜ್ಯಗಳ ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದು, ‘ಮಹಾ ರಾಬರಿ’ಯ ಹಿಂದಿನ ನಿಜಾಂಶವನ್ನು ಪತ್ತೆಹಚ್ಚಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ₹400 ಕೋಟಿ ದರೋಡೆ ಕೇಸ್ ಮುಂದೆ ಹೋಗುತ್ತಿದ್ದಂತೆ, ಇದು ದೇಶದ ಅತಿದೊಡ್ಡ ಹಣಕಾಸು ಅಪರಾಧಗಳಲ್ಲಿ ಒಂದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Leave a Comment